ಇತ್ತೀಚಿಗೆ ಒಂದು ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ಕೆಲ ಪಾಲಕರು ತಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ವಿಷಯ ಆಸಕ್ತಿದಾಯಕ ಎನಿಸಿತು. ನಾನು ಆ ಸಭೆಯಲ್ಲಿ ಭಾಗಿಯಾದೆ. 

ಎಲ್ಲಾ ಪಾಲಕರಿಗೂ ಈ ವಿಷಯ ಉಪಯುಕ್ತವಾದದ್ದು ಎನಿಸಿತು. ಹಾಗಾಗಿಯೇ ಕೆಲ ಪ್ರಮುಖ ವಿಷಯಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 

 ಸಾಮಾನ್ಯವಾಗಿ ಪಾಲಕರು ತಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ಸವಾಲುಗಳನ್ನು ಎದುರಿಸಬಹುದು.

 ಅವುಗಳಲ್ಲಿ ಕೆಲವೊಂದು ಇಲ್ಲಿದೆ.

  1. ನಮ್ಮ ಮಗುವಿಗೆ ಅವರ ಆಸಕ್ತಿಯ ಆಧಾರದ ಮೇಲೆ ವೃತ್ತಿಯನ್ನು ಆಯ್ಕೆ ಮಾಡಲು ನಾವು ಸೂಚಿಸಬೇಕೇ        ಅಥವಾ ಅವರ ಶಿಕ್ಷಣದ ಆಧಾರದ ಮೇಲೆಯೇ?
  2. ಬೇಡಿಕೆ ಇರುವ ವೃತ್ತಿಗೆ ಬೇಕಾದ ಜ್ಞಾನ ಮತ್ತು ಕೌಶಲ್ಯಗಳು ನಿಮ್ಮ ಮಗುವಿನಲ್ಲಿ ಲಭ್ಯವಿದೆಯೇ?
  3. ವಿವಿಧ ವೃತ್ತಿ ಅವಕಾಶಗಳಿಗೆ ನಿಮ್ಮ ಮಗುವನ್ನು ಹೇಗೆ ಪರಿಚಯಿಸುವುದು?
  4. ಮಕ್ಕಳ ವ್ಯಕ್ತಿತ್ವ ಮತ್ತು ಆಸಕ್ತಿಯ ಮೇರೆಗೆ ವೃತ್ತಿಜೀವನ ಆರಿಸೋದು ಹೇಗೆ?
  5. ನಿಮ್ಮ ಮಗುವಿಗಾಗಿ ಸರಿಯಾದ ವೃತ್ತಿ ತರಬೇತುದಾರರನ್ನು ಹೇಗೆ ಮತ್ತು ಎಲ್ಲಿ ಹುಡುಕುವುದು?

ನಿಮಗೂ ಇಂತಹ ಅನುಭವ ಆಗಿದೆಯೇ? ಹೌದೆಂದಾದರೆ ಈ ಅಂಕಣ ನಿಮಗೆ ಉಪಯೋಗ ಆಗಬಹುದು

ಸರಿಯಾದ ವೃತ್ತಿಜೀವನದ ಮಾರ್ಗವನ್ನು ತಿಳಿಸುವ ಮೊದಲು ಸರಿಯಾದ ವೃತ್ತಿಜೀವನವನ್ನು ಆಯ್ಕೆ ಮಾಡದಿದ್ದರೆ ಏನಾಗುತ್ತದೆ ಎಂದು ನೋಡೋಣ.

ವೃತ್ತಿಜೀವನದ ಆಯ್ಕೆ ತಪ್ಪಾಗಿದ್ದರೆ ನಿಮ್ಮ ಮಕ್ಕಳ ಜೀವನಶೈಲಿಯ ಮೇಲೆ ಅದು ಪರಿಣಾಮ ಬೀರುತ್ತದೆ.

 

ಯಾವುದೇ ಕೆಲಸವನ್ನು ನಾವು ಇಷ್ಟಪಟ್ಟು ಮಾಡಿದರೆ ಅದು ನಮಗೆ ಕಷ್ಟವೆನಿಸದು. ನಾವು ಮಾಡುತ್ತಿರುವ ಕೆಲಸದಲ್ಲಿ ನಮಗೆ ಎಷ್ಟೇ ಸೌಕರ್ಯಗಳು ಮತ್ತು ಸವಲತ್ತುಗಳು ಸಿಕ್ಕರೂ ಕೂಡ ಅದು ನಮ್ಮ ಮನಸ್ಸಿಗೆ ಹತ್ತಿರ ಆಗಿರದಿದ್ದರೆ ಅದು ನಮ್ಮ ಜೀವನಶೈಲಿ ಮೇಲೆ ಪರಿಣಾಮ ಬೀರಲು ಶುರುಮಾಡುತ್ತದೆ.

 ಆರೋಗ್ಯಕ್ಕೆ ಒಳ್ಳೆಯದಾಗುವ ಆಹಾರ ನಮಗೆ ಇಷ್ಟವಾಗದಿದ್ದರೂ ಅದು ನಮಗೆ ಹಿತವನ್ನೇ ಕೊಡುತ್ತದೆ ಆದರೆ ಮನಸ್ಸಿಗೆ ಹತ್ತಿರವಾಗಿರದ ಕೆಲಸ ನಮಗೂ ಹಾಗೂ ನಮ್ಮ ಆರೋಗ್ಯಕ್ಕೂ ಹಿತಕರವಾಗದು.

ಇಷ್ಟವಾಗಿರದ ಕೆಲಸದಲ್ಲಿ ನಮ್ಮ ದೇಹದ ಜೊತೆ ಮನಸು ಕೂಡ ದಣಿಯುತ್ತದೆ ಅದರಿಂದ ನಮ್ಮ ಇತರೆ ಕೆಲಸಕಾರ್ಯಗಳಲ್ಲಿ ಮತ್ತು ಸಂಬಂಧಗಳಲ್ಲಿ ಬಿರುಕುಗಳು ಉಂಟಾಗಲು ಶುರುವಾಗುತ್ತದೆ.

 ತಪ್ಪು ಆಯ್ಕೆ ವೃತ್ತಿಯು ಬೇಡುವ ಜವಾಬ್ದಾರಿಗಳನ್ನು ಕಲಿತಿಲ್ಲ ಎಂದರೆ ಅದು  ಕಿರಿಕಿರಿ ಎನಿಸುತ್ತದೆ. ನಿಮ್ಮ ಮತ್ತು ನಿಮ್ಮ ಮಕ್ಕಳ ಮೇಲೆ ಅದು ಗಂಭೀರ ಪರಿಣಾಮ ಎನಿಸುತ್ತದೆ.

ಬೇಡದ ಕೆಲಸದಲ್ಲಿ ಕೌಶಲ್ಯದ ಕೊರತೆ ಎದ್ದು ಕಾಣಿಸುತ್ತದೆ

 

ಯಾವ ಕಲಿಸವು ನಮಗೆ ಹಿಡಿಸುವುದಿಲ್ಲವೋ ಆ ಕೆಲಸಲ್ಲಿ ಅಭಿವೃದ್ಧಿ ಹೊಂದುವದಿರಲಿ ನಾವು ಅದರಲ್ಲಿ ಇನ್ನೂ ಹೆಚ್ಚಿನದನ್ನು ಏನಾದರೂ ಕಲಿಯಬೇಕು ಎನ್ನುವ ಯೋಚನೆ ಕೂಡ ನಮಗೆ ಬರುವುದಿಲ್ಲ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂದಿನ ವಿದ್ಯಮಾನದಲ್ಲಿ ನಮ್ಮ ಕೌಶಲ್ಯವೂ ವೃದ್ಧಿ ಯಾಗದಿದ್ದರೆ ನಮಗೆ ನಮ್ಮ ಕೆಲಸವನ್ನು ನಿಭಾಯಿಸುವಲ್ಲಿ ಕಷ್ಟವೆನಿಸತೊಡಗುತ್ತದೆ. ನಮ್ಮ ಕೆಲಸವು ನಮಗೆ ಬೇಸರವೆನಿಸತೊಡಗಿದಾಗ ನಾವು ಅದರಲ್ಲಿ ಅಭಿವೃದ್ಧಿಯನ್ನು ಹೊಂದುವುದರ ಕಡೆ ಗಮನ ಕೊಡದೆ ಬೇರೆ ಕೆಲಸಗಳನ್ನು ಹುಡುಕಾಡುವುದು ರಲ್ಲಿ ನಮ್ಮ ಸಮಯವನ್ನು ಬಳಸುತ್ತೇವೆ.

ಪರ್ಸನಲ್ ಲೈಫ್ ಮತ್ತು ಕೆರಿಯರ್ ಲೈಫ್ ಬ್ಯಾಲೆನ್ಸ್ ಮಾಡಲು ಕಷ್ಟ ಆಗಬಹುದು

 

ನಮಗೆ ಇಷ್ಟವಿಲ್ಲದ ಕೆರಿಯರ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಜೀವನ ನಿಭಾಯಿಸುವುದರಲ್ಲಿ ನಮಗೆ ಕಷ್ಟವಾಗುತ್ತದೆ. ಏಕೆಂದರೆ, ನಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಿ ಮುಗಿಸಲು ಬಹಳ ಸಮಯ ವ್ಯರ್ಥವಾಗುತ್ತದೆ ಹಾಗೂ ನಮಗೆ ನಮ್ಮ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುತ್ತದೆ ಮತ್ತು ಒಳ್ಳೆಯ ಫಲಿತಾಂಶ ಕೂಡ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪರಿಣಾಮವಾಗಿ ನಾವು ನಮ್ಮ ವೈಯಕ್ತಿಕ ಜೀವನದಲ್ಲೂ ನೋವು, ಕಿರಿಕಿರಿ ಅನುಭವಿಸಬೇಕಾಗುತ್ತದೆ. ಒಂದು ವೇಳೆ, ನಾವು ನಮಗಿಷ್ಟವಾದ ವೃತ್ತಿಯಲ್ಲಿ ಇದ್ದರೆ ಬಹಳ ಖುಷಿಯಿಂದ ಕೆಲಸ ನಿರ್ವಹಿಸುತ್ತೇವೆ ಹಾಗೂ ಅದರ ಫಲಿತಾಂಶವು ಕೂಡ ಚೆನ್ನಾಗಿ ಬರುತ್ತದೆ. ಅದಲ್ಲದೆ ನಮ್ಮ ಪರಿವಾರದಲ್ಲಿ ಸಂತೋಷದಿಂದ ಇರಬಹುದು. ಇದರಿಂದ ನಾವು ನಮ್ಮ ಕೆರಿಯರ್ ಲೈಫ್ ಹಾಗೂ ಪ್ರೊಫೆಷನಲ್ ಲೈಫ್ ಅನ್ನು ನಿಭಾಯಿಸಲು ಯಾವುದೇ ಕಷ್ಟವಾಗುವುದಿಲ್ಲ

ಆದ್ದರಿಂದ ನಿಮ್ಮ ಮಗುವಿಗೆ ವೃತ್ತಿಜೀವನವನ್ನು ಸೂಚಿಸುವಾಗ ನೀವು ಕೆಳಗಿನ ಅಂಶಗಳನ್ನು ಪರಿಗಣಿಸಬಹುದು.

Step 1 – ನಿಮ್ಮ ಮಕ್ಕಳ ಆಸಕ್ತ ಕ್ಷೇತ್ರ ಯಾವುದೆಂದು ತಿಳಿಯಿರಿ

ಪಾಲಕರಾಗಿ ನಾವು ನಮ್ಮ ಮಗುವಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದೆ, ಯಾವುದರಲ್ಲಿ ನಮ್ಮ ಮಗು ತನ್ನ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ. ಅದನ್ನು ನೀವು ನಿಮ್ಮ ಮಗು ಮಾಡುವ ಚಟುವಟಿಕೆ ಮೂಲಕ ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಇತ್ತೀಚಿನ ಮಕ್ಕಳಲ್ಲಿ ವಿಧವಿಧವಾದ ಆಸಕ್ತಿ ಹಾಗೂ ಕೌಶಲ್ಯ ಗಳಿರುತ್ತವೆ, ಅದರಲ್ಲಿ ಆ ಮಗು ಯಾವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತದೆ ಎನ್ನುವುದನ್ನು ಕಂಡುಕೊಳ್ಳಬೇಕು. ಉದಾಹರಣೆಗೆ ನಿಮ್ಮ ಮಗು ಹಾಡುವುದರಲ್ಲಿ, ಪೇಂಟ್ ಮಾಡುವುದರಲ್ಲಿ, ಡಾನ್ಸ್ ಮಾಡುವುದರಲ್ಲಿ ಹಾಗೂ ಕ್ರಿಯೇಟಿವಿಟಿ ವರ್ಕ್ ಮಾಡುತ್ತಿದ್ದರೆ, ಇಷ್ಟು ಕೌಶಲ್ಯಗಳಲ್ಲಿ ಮಗು ಯಾವುದರ ಕಡೆಗೆ ಹೆಚ್ಚಿನ ಗಮನಹರಿಸುತ್ತದೆ ಹಾಗೂ ಹೆಚ್ಚಿನ ಆಸಕ್ತಿ ತೋರಿಸುತ್ತದೆ ಎಂದು ಕಂಡುಕೊಳ್ಳಿರಿ.

ನಿಮ್ಮ ಮಗುವಿಗೆ ಯಾವ ಕೌಶಲ್ಯದ ಕಡೆ ಗಮನ ಹರಿಸುತ್ತಿದೆ, ಹಾಗೂ ಕೌಶಲ್ಯಕ್ಕೆ ಸಂಬಂಧಪಟ್ಟಂತೆ ಯಾವ ಯಾವ ಕರಿಯರ್ ಅಪಾರ್ಚುನಿಟಿ ಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಂಡು ನಿಮ್ಮ ಮಗುವಿಗೂ ಸಹ ಅದನ್ನು ಮನವರಿಕೆ ಮಾಡಿಸುವುದು ಪಾಲಕರಾದ ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಮಗುವಿಗೆ ತನಗೆ ಇಷ್ಟವಾದ ಕರಿಯರ್ ಆಯ್ಕೆಮಾಡಿಕೊಳ್ಳಲು ತುಂಬಾನೇ ಸರಳವಾಗುತ್ತದೆ ಹಾಗೂ ಅದರಲ್ಲಿ ಹೆಚ್ಚಿನ ಯಶಸ್ವಿ ಮತ್ತು ಗೌರವವನ್ನು ಸಂಪಾದಿಸುತ್ತಾರೆ. ಹೀಗಾಗಿ ನಮ್ಮ ಮಕ್ಕಳಿಗೆ ಕ್ಷೇತ್ರದ ಬಗ್ಗೆ ತಿಳಿಸಿಕೊಟ್ಟು ತನಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುವುದು ಪಾಲಕರ ಜವಾಬ್ದಾರಿಯಾಗಿದೆ.

Step 2 – ನಿಮ್ಮ ಹತ್ತಿರದ ವೃತ್ತಿ ತರಬೇತುದಾರರನ್ನು ಹುಡುಕಿ ಮತ್ತು ಸಂಪರ್ಕಿಸಿ

ನಿಮ್ಮ ಮಗು, ಯಾವುದೇ ಕ್ಷೇತ್ರದಲ್ಲಿ ಮುಂದುವರೆಯಬೇಕಾದರೆ ತರಬೇತುದಾರರ ಅವಶ್ಯಕತೆ ತುಂಬಾನೇ ಇದೆ. ಏಕೆಂದರೆ ,ಅವರು ಕಟ್ಟುನಿಟ್ಟಾಗಿ ಹಂತಹಂತವಾಗಿ ಹೇಗೆ ಮುಂದುವರೆಯ ಬೇಕೆಂಬುದನ್ನು ತಿಳಿಸಿಕೊಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಯದ ಉಳಿತಾಯ ಹಾಗೂ ಎಷ್ಟು ಸಮಯವನ್ನು ಏನನ್ನು ಸಾಧಿಸುವುದರಲ್ಲಿ ಮೀಸಲಿಡಬೇಕು ಎಂಬುದನ್ನು   ತಿಳಿಸಿಕೊಡುತ್ತಾರೆ. ಇದರಿಂದ, ನಾವು ನೀವು 10 ವರ್ಷದಲ್ಲಿ ಸಾಧಿಸಬೇಕಾದ ದ್ದನ್ನು ನಿಮ್ಮ ಮಗು ಕೇವಲ 1 ವರ್ಷದಲ್ಲಿ ಸಾಧನೆ ಮಾಡಿ ತೋರಿಸಲು ಸಹಾಯವಾಗುತ್ತದೆ. ಇದರಿಂದ ನಿಮ್ಮ ಮಗುವಿನ ಗೌರವ ಹಾಗೂ ನಿಮ್ಮ ಮನೆತನದ ಗೌರವ ಕೂಡ ಹೆಚ್ಚುತ್ತದೆ.

ಪ್ರತಿಯೊಬ್ಬರ ಜೀವನದಲ್ಲಿ ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸುವುದು ತುಂಬಾನೇ ಸರಳ.

ಎಲ್ಲರಿಗೂ ತಮ್ಮ ತಮ್ಮ ಜೀವನದಲ್ಲಿ ತಮ್ಮದೇ ಆದ ಕೆಲವು ಗುರಿ ಗಳಿರುತ್ತವೆ, ಆದರೆ ಆ ಗುರಿಯನ್ನು ತಲುಪಬೇಕಾದರೆ ಏನು ಮಾಡಬೇಕು? ಎಂಬ ಸ್ಪಷ್ಟತೆ ಅವರಿಗೆ ಸಿಕ್ಕಿರುವುದಿಲ್ಲ. ಹಾಗಾಗಿ ತಮಗಿಷ್ಟಬಂದಂತೆ ಗುರಿ ಸಾಧಿಸುವುದರಲ್ಲಿ ಎಷ್ಟೋ ಸಮಯವನ್ನು ಕಳೆದು ಬಿಡುತ್ತಾರೆ. ಅದರಲ್ಲಿ ಕೆಲವರಿಗೆ ಗೆಲವು ಸಿಗಬಹುದು, ಇನ್ನೂ ಕೆಲವರಿಗೆ ಸಿಗದೇ ಇರಬಹುದು. ಹಾಗಾಗಿ ನಾವು ನುರಿತ ತರಬೇತುದಾರರಿಂದ ತರಬೇತಿಯನ್ನು ಪಡೆದು ನಮಗಿಷ್ಟವಾದ ಕ್ಷೇತ್ರದಲ್ಲಿ ಮುಂದುವರೆದರೆ, ನಮ್ಮ ಸಮಯವು ಉಳಿತಾಯವಾಗುವುದು ಹಾಗೂ ಚಿಕ್ಕವಯಸ್ಸಿನಲ್ಲಿ ದೊಡ್ಡದನ್ನು ಸಾಧಿಸಲು ಸಹಾಯವಾಗುತ್ತದೆ. ಉದಾಹರಣೆಗೆ, ಫಿಲ್ಮ್ ಆಕ್ಟರ್ಸ್, ಸ್ಫೋರ್ಟ್ಸ್ಮನ್, ಹೀಗೆ ಇನ್ನಿತರ ಕಲಾವಿದರು ಅವರ ಹಿಂದೆ ತರಬೇತುದಾರ ಇರುವದರಿಂದಲೇ ಅವರಿಗೆ ಆ ಕ್ಷೇತ್ರದಲ್ಲಿ ಸಂಪೂರ್ಣವಾದ ಯಶಸ್ವಿ ದೊರೆತಿರುತ್ತದೆ. ಹಾಗಾಗಿ ನಾವು ಕೂಡ ನಮ್ಮ ಮಕ್ಕಳಿಗೆ ತರಬೇತಿ ಕೊಡಿಸುವುದರಿಂದ ಅವರು ತಮ್ಮ ಜೀವನದಲ್ಲಿ ಬೇಗನೆ ಯಶಸ್ಸನ್ನು ಕಂಡುಕೊಳ್ಳುತ್ತಾರೆ.

ಲರ್ನರ್‌ಜೋನ್‌ ಮೊದಲ ಬಾರಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ತರಬೇತಿ ಕಾರ್ಯಕ್ರಮದ ಮೇಲೆ ರೂ-3000/- ರಿಯಾಯಿತಿಯನ್ನು ನೀಡುತ್ತಿದೆ. ತರಬೇತುದಾರರೊಂದಿಗೆ ನಿಮ್ಮ ಉಚಿತ ಸಮಾಲೋಚನೆಯ ಕರೆಯನ್ನು ನೀವು ಬುಕ್ ಮಾಡಬಹುದು ಮತ್ತು ಕಾರ್ಯಕ್ರಮದ ಎಲ್ಲಾ ವಿವರಗಳನ್ನು ಪಡೆಯಬಹುದು. Google ನಲ್ಲಿ ಅಥವಾ ಅವರ YouTube ಚಾನಲ್‌ನಲ್ಲಿ ಅವರ ವಿದ್ಯಾರ್ಥಿಗಳು ನೀಡಿದ ವಿಮರ್ಶೆಗಳನ್ನು ಸಹ ನೀವು ಪರಿಶೀಲಿಸಬಹುದು.

ಕೋಚ್ ವಿರೇಶ್ ಅವರೊಂದಿಗೆ ನಿಮ್ಮ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
https://calendly.com/vireeshthecareercoach/60min

LEARNERZONES ವಿದ್ಯಾರ್ಥಿಗಳು Google ನಲ್ಲಿ ನೀಡಿದ ಪ್ರತಿಕ್ರಿಯೆಯನ್ನು ಓದಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://bit.ly/3nFRu9c

ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಕೆರಿಯರ್ ಬ್ರೇಕ್‌ಥ್ರೂ ಫಾರ್ಮುಲಾ ಕೋರ್ಸ್‌ಗೆ ಸೇರಿ ಮತ್ತು ಇಂದೇ ರೂ-3000/- ಉಳಿಸಿ.

CBF

Step 3 – ನಿಮ್ಮ ಮಗುವಿನ ಆಸಕ್ತಿಯು ವಿಭಿನ್ನವಾಗಿದ್ದರೆ ಜನರ ಮಾತುಗಳಿಂದ ತಲೆಕೆಡಿಸಿಕೊಳ್ಳಬೇಡಿ

  ಯಾರಾದರೂ ತಮ್ಮ ಜೀವನದಲ್ಲಿ ಮುಂದುವರೆಯುತ್ತಿದ್ದಾರೆ, ಎಂದರೆ ಅದನ್ನು ಬೆಂಬಲಿಸುವ ದಕ್ಕಿಂತ, ಅವರ ವಿರುದ್ಧವಾಗಿ ಮಾತನಾಡಿ ಅವರು ಗುರಿಯನ್ನು ತಲುಪದ ಹಾಗೆ ಮಾಡುವವರು ಇರುತ್ತಾರೆ. ಹಾಗಾಗಿ ನಿಮ್ಮ ಮಗುವಿನ ಆಸಕ್ತಿ ಎಲ್ಲರೂ ದಕ್ಕಿಂತಲೂ ವಿಭಿನ್ನವಾಗಿದ್ದರೂ ಕೂಡ, ನೀವು ಜನರಾಡುವ ಮಾತುಗಳಿಂದ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಲ್ಲಿ ನಿಮ್ಮ ಮಗುವಿನ ಛಲ ಮತ್ತು ಬಲ ಗೊತ್ತಿರುವುದು ಪಾಲಕರಾದ ನಿಮಗೊಬ್ಬರಿಗೆ ಮಾತ್ರ.

ಉದಾಹರಣೆಗೆ, ಮಹಾವೀರ್ ಸಿಂಗ್ ಫೋಗಟ್ ರವರು ತಮ್ಮ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಕುಸ್ತಿಯಲ್ಲಿ ಸರಿಯಾದ ತರಬೇತಿ ಕೊಡಿಸಿ ಅದರಲ್ಲಿ ಅವರು ಗೋಲ್ಡ್ ಮೆಡಲ್ ಪಡೆಯುವ ಹಾಗೆ ಅವರನ್ನು ಪ್ರೋತ್ಸಾಹಿಸಿದರು. ಅವತ್ತು ಅವರು ಜನರ ಹಾಗೂ ಸಮಾಜದ ಮಾತಿಗೆ ಕಿವಿ ಕೊಟ್ಟಿದ್ದರೆ ಬಹುಶಹ ಅವರ ಮಕ್ಕಳಿಂದ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ . ಹಾಗೆಯೇ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಕಡೆ ಗಮನ ಹರಿಸದೆ ಓದಿನ ಕಡೆಗೆ ಗಮನ ಹರಿಸಿದರೆ ಅವರು ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರನಾಗಿ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೇಗೆ ನೀವು ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿ ಅವರಿಗೆ ಮುಂದುವರೆಯಲು ಪ್ರೋತ್ಸಾಹಿಸಿ.

Step 4 – ನಿಮ್ಮ ಮಗುವಿನ ಆಸಕ್ತಿಯ ಕ್ಷೇತ್ರದಲ್ಲಿ ಲಭ್ಯವಿರುವ ಕೋರ್ಸ್‌ಗಳನ್ನು ಪರಿಶೀಲಿಸಿ ಮತ್ತು ಇನ್ನಷ್ಟು ತಿಳಿದುಕೊಳ್ಳಲು ಅವರಿಗೆ ಸಹಾಯ ಮಾಡಿ ಮತ್ತು ಪ್ರೋತ್ಸಾಹಿಸಿ

        ಮಗುವಿನ ಆಸಕ್ತಿಯ ಕ್ಷೇತ್ರ ಕಂಡುಕೊಂಡ ನಂತರ, ಆ ಕ್ಷೇತ್ರದಲ್ಲಿ ಲಭ್ಯವಿರುವ ಬೇರೆಬೇರೆ ಕ್ಷೇತ್ರಗಳನ್ನು ಪರಿಚಯಿಸಿ ಕೊಡಿ. ಉದಾಹರಣೆಗೆ, ನಿಮ್ಮ ಮಗುವಿಗೆ ಕಲೆಯಲ್ಲಿ ಆಸಕ್ತಿ ಇದ್ದರೆ, ಗ್ರಾಫಿಕ್ಸ್ ಕ್ಷೇತ್ರದಲ್ಲಿ, ಕಂಪ್ಯೂಟರ್ ವಿಭಾಗದಲ್ಲಿ, ಹಾಗೂ ಕಂಪ್ಯೂಟರ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೂಡ ಕಲಿಯಲು ಅನುಕೂಲವಾಗುವುದು. ಇನ್ನು ನಾಟ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೆ, ಭರತನಾಟ್ಯ, ಕ್ಲಾಸಿಕಲ್ ಡ್ಯಾನ್ಸ್, ಕಥಕ್ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಮುಂದುವರೆಯಲು ಸಹಾಯವಾಗುತ್ತದೆ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ತರಹದ ಕೋರ್ಸುಗಳಿವೆ ಎಂಬುದನ್ನು ತಿಳಿದುಕೊಂಡು ಅದರಲ್ಲಿ ನಿಮ್ಮ ಮಗುವಿಗೆ ಆಸಕ್ತಿ ಇದ್ದರೆ, ಆ ಕ್ಷೇತ್ರದಲ್ಲಿ ನಿಮ್ಮ ಮಗುವಿನ ಕರಿಯರನ್ನು ಕಂಡುಕೊಳ್ಳಲು ಬಹಳ ಸಹಾಯವಾಗುವುದು.

        ನಿಮ್ಮ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಹಾಗೂ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಯಶಸ್ವಿಯಾಗುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಿ.

         ನಿಮ್ಮ ಮಗುವಿನ ಬಲ ಹಾಗೂ ಆಸಕ್ತಿ ಯಾವುದರಲ್ಲಿದೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ, ಅವರು ಅದೇ ನಿಟ್ಟಿನಲ್ಲಿ ಮುಂದುವರೆಯುವಂತೆ ನೀವು ಅವರಿಗೆ ಬೆಂಬಲ ಹಾಗೂ ಪ್ರೋತ್ಸಾಹ  ನೀಡಿದ್ದಲ್ಲಿ , ಅದರಲ್ಲಿ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ, ಎಂಬುದನ್ನು ಅವರಿಗೆ ತಿಳಿಹೇಳಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿ.

Step 5 – ಕೋರ್ಸ್‌ಗೆ ಅಗತ್ಯವಿರುವ ಹಣಕಾಸಿನ ಯೋಜನೆ ಮತ್ತು ನಿಮ್ಮ ಮಗುವನ್ನು ಕಲಿಯಲು ಮತ್ತು ಬೆಳೆಯಲು ಮಾನಸಿಕವಾಗಿ ಸಿದ್ಧಪಡಿಸಿ

ಎಲ್ಲರೂ ಕೂಡ ಮಗು ಬೆಳೆದು ದೊಡ್ಡವನಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಉನ್ನತ ಸ್ಥಾನ ಗಳಿಸಬೇಕೆಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ. ಆದರೆ ಎಲ್ಲರಿಗೂ ಎಲ್ಲದನ್ನು ಮಾಡುವುದು ಅಸಾಧ್ಯ. ಹಾಗಾಗಿ, ನಾವು ನಮ್ಮ ಮಗುವನ್ನು ಯಾವ ಕ್ಷೇತ್ರದಲ್ಲಿ ಬೆಳವಣಿಗೆಯಾಗಬೇಕು ಎಂದು   ಬಯಸಿದ್ದೇವೆ ,ಆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ  ಹಣಕಾಸಿನ ಯೋಜನೆ ನಮಗೆ ಇದೆಯಾ ಅಥವಾ ಇಲ್ಲವಾ ಎಂಬುದನ್ನು ಅರಿತುಕೊಂಡು ಅದನ್ನು ನಮ್ಮ ಮಕ್ಕಳಿಗೂ ತಿಳಿ ಹೇಳಬೇಕಾಗುವುದು.

                        ಮಕ್ಕಳ ಬಯಕೆ ಬೇಡಿಕೆಗಳನ್ನು ಈಡೇರಿಸುವ ದರಲ್ಲಿ ಪಾಲಕರು ತಮ್ಮ ಕಷ್ಟವನ್ನು ಮರೆತುಬಿಡುತ್ತಾರೆ. ಹೇಗಾದರೂ ಮಾಡಿ ತಮ್ಮ ಮಗು ಮುಂದೆ ಬರಬೇಕೆಂಬ ಆಸೆ ಅವರಲ್ಲಿರುತ್ತದೆ ಹಾಗಾಗಿ ಅವರು ತಮ್ಮ ಕಷ್ಟವನ್ನು  ಹೇಳಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಹಣದ ಖರ್ಚು-ವೆಚ್ಚದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ತುಂಬಾನೇ ಅವಶ್ಯವಾಗಿದೆ. ಇದರಿಂದ ಮಕ್ಕಳು ಕೂಡ ಪಾಲಕರ ಕಷ್ಟವನ್ನು ಅರಿತುಕೊಂಡು ತಮಗಿದ್ದ ಹಣದ ಯೋಜನೆಯಲ್ಲಿ ಅವರು ಸಾಧನೆ ಮಾಡಬೇಕಾಗಿದ್ದ ಕಡೆಗೆ ಗಮನ ಹರಿಸುತ್ತಾರೆ. ಹೀಗೆ ಮಗುವನ್ನು ತನಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಬೆಳೆಸುವುದು ಮತ್ತು ಅವರನ್ನು ಮಾನಸಿಕವಾಗಿ ಸಿದ್ಧಪಡಿಸುವುದು ನಮ್ಮ ಕರ್ತವ್ಯ.

Step 6. ನಿಮ್ಮ ಮಗುವಿಗೆ ನಿಮ್ಮ ಬೆಂಬಲ ಬೇಕು ಮತ್ತು ಬೇರೇನೂ ಇಲ್ಲ

ನಿಮ್ಮ ಅಮೂಲ್ಯ ರತ್ನ ನಿಮ್ಮ ಮಗು. ಆ ಮಗುವಿಗೆ ಬೇಕಾಗಿರುವುದು ಕೇವಲ ನಿಮ್ಮ ಬೆಂಬಲ. ನೀವು ನಿಮ್ಮ ಮಗುವಿಗೆ ಬೆಂಬಲ ನೀಡುತ್ತಾ, ಪ್ರೋತ್ಸಾಹಿಸುತ್ತಾ ಹೋಗಿ, ಆಗ ನೋಡಿ ನಿಮ್ಮ ಮಗು ಹೇಗೆ ಸಾಧನೆಯ ಮೆಟ್ಟಿಲು ಎರುತ್ತದೆ.

                   ಒಮ್ಮೆ, ಒಂದು ಮಗು ತನ್ನ ಶಾಲೆಯಲ್ಲಿ ತನ್ನ ಗುರುಗಳು ಕೊಟ್ಟ ಚೀಟಿಯನ್ನು ತಂದು ತನ್ನ ತಾಯಿಗೆ ಕೊಡುತ್ತಾ ಹೇಳುತ್ತದೆ, ಅಮ್ಮ..ಇದರಲ್ಲಿ ಏನು ಬರೆದಿದೆ ಓದು ಎಂದು. ಆಗ ಆ ತಾಯಿ ಅದನ್ನು ಓದಿ ಹೇಳುತ್ತಾಳೆ, ಮಗು ನೀನು ಶಾಲೆಯಲ್ಲಿ ಅತಿ ಬುದ್ಧಿವಂತ. ನಿನ್ನ ಬುದ್ಧಿವಂತಿಕೆಗೆ ತಕ್ಕಂತೆ ಕಲಿಸುವಂತಹ ಗುರುಗಳು ಆ ಶಾಲೆಯಲ್ಲಿ ಇಲ್ಲ. ಹಾಗಾಗಿ ನಿನ್ನನ್ನು ಶಾಲೆಗೆ ಬರಬೇಡ ಎಂದು ಬರೆದಿದ್ದಾರೆ ಮಗು ಎಂದು ಆ ತಾಯಿ ಹೇಳುತ್ತಾಳೆ. ನಂತರ ಆ ಮಗು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತದೆ. ತಾಯಿ ತನ್ನ ಮಗುವಿಗೆ ವಿದ್ಯೆಯನ್ನು ಹೇಳದಿದ್ದರೂ ಕೂಡ ಆ ಮಗುವಿಗೆ ಸದಾ ಬೆನ್ನೆಲುಬಾಗಿ ಬೆಂಬಲವಾಗಿ ನಿಲ್ಲುತ್ತಾಳೆ. ಅದೇ ಪರಿಣಾಮವಾಗಿ ಮುಂದೊಂದು ದಿನ ಆ ಮಗು ಒಬ್ಬ ಒಳ್ಳೆಯ ವಿಜ್ಞಾನಿಯಾಗಿ ಮಿಂಚುತ್ತಾನೆ. ಆ ಮಗು ಬೇರೆ ಯಾರೂ ಅಲ್ಲ, ಅಲ್ಬರ್ಟ್ ಐನ್ಸ್ಟೀನ್ ರವರು. ಮುಂದೊಂದು ದಿನ ಅವರಿಗೆ ಚೀಟಿ ಸಿಗುತ್ತದೆ. ಅದನ್ನು ಓದಿದರೆ ಅದರಲ್ಲಿ ಹೀಗೆ ಬರೆದಿರುತ್ತದೆ, ನೀನೊಬ್ಬ  ಮಂದಗತಿಯ ಹುಡುಗ. ನಿನಗೆ ಕಲಿಸುವುದು ನಮ್ಮಿಂದ ಯಾರಿಗೂ ಸಾಧ್ಯವಾಗುವುದಿಲ್ಲ, ನೀನು ಈ ಶಾಲೆಗೆ ಬರಲು ಅರ್ಹನಲ್ಲ, ಎಂದು ಬರೆದಿರುತ್ತದೆ. ಆಗ ಅವರಿಗೆ ಅರ್ಥವಾಯಿತು ತನ್ನ ತಾಯಿಯ ಬೆಂಬಲ ತನಗೆ ಎಷ್ಟಿದೆ ಎಂದು. ಇದು ಪ್ರತಿಯೊಬ್ಬ ತಾಯಿ ತನ್ನ ಮಕ್ಕಳಿಗೆ ನೀಡುವ ನಿಜವಾದ ಬೆಂಬಲ. 

ನಿಮ್ಮ ಮಗುವನ್ನು ದೊಡ್ಡ ಉದ್ದೇಶಕ್ಕಾಗಿ ಸಿದ್ಧಪಡಿಸಲು ನಿಮ್ಮ ಮಗು ಮಾನಸಿಕವಾಗಿ ತುಂಬಾ ಸದೃಢವಾಗಿರಬೇಕು. ಆದ್ದರಿಂದ ನಿಮ್ಮ ಮಗುವಿಗೆ ಧ್ಯಾನವನ್ನು ಅಭ್ಯಾಸ ಮಾಡಲು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ. ನಿಮ್ಮ ಮಗು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಮತ್ತು ಮಾನಸಿಕ ಶಕ್ತಿಯನ್ನು ಪಡೆಯಲು ಧ್ಯಾನವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ವಿವರವಾಗಿ ತಿಳಿದುಕೊಳ್ಳಲು ಬಯಸಿದರೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಸುಂದರವಾದ ಬ್ಲಾಗ್ ಅನ್ನು ಓದಿ

ಈ ಅಂಕಣವು ನಿಮಗೆ ಉಪಯುಕ್ತವಾಗಿದೆ ಎಂದು ಅನಿಸಿದರೆ ಇದನ್ನು ನಿಮ್ಮ ಇತರ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

ಇನ್ನು ಬೇರೆ ಯಾವುದೇ ವಿಷಯದ ಬಗ್ಗೆ ನಿಮಗೆ ಮಾಹಿತಿ ಬೇಕಾದರೆ ಕಮೆಂಟ್ ಬಾಕ್ಸಲ್ಲಿ ನಮಗೆ ತಿಳಿಸಿ, ನಮ್ಮ ಮುಂದಿನ ಬ್ಲಾಗ್ ನಿಮ್ಮ ಕೋರಿಕೆಯ ಮೇರೆಗೆ ಬರೆಯುತ್ತೇವೆ