ಮೊನ್ನೆ ಯಾವುದೋ ಒಂದು ದಿನಪತ್ರಿಕೆಯಲ್ಲಿ ಒಂದು ಅಂಕಣ ಬಂದಿತ್ತು. ಅದರಲ್ಲಿ Rachana Parmar ಬಗ್ಗೆ ಬರೆದಿತ್ತು . ಹಾಗೆಯೇ ಓದುತ್ತ ಹೋದೆ. ಆಕೆ ಒಬ್ಬ ಗೃಹಿಣಿ. ಎರಡು ಮಕ್ಕಳ ತಾಯಿ. ವಿದ್ಯಾಭ್ಯಾಸ ಮುಗಿದ ನಂತರ ಮದುವೆ ಮುಂತಾದವುಗಳಲ್ಲಿ ನಿರತಳಾಗಿದ್ದಳು. ಏನೋ ಮಾಡಬೇಕು ಎಂಬ ಹಂಬಲ, ವಿದ್ಯಾಭ್ಯಾಸ ವ್ಯರ್ಥ ಆಯಿತು ಎಂಬ ಚಿಂತೆ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವಳು ಮನೆಯಲ್ಲಿ ಕುಳಿತು ಏನು ಮಾಡಬೇಕು ಎಂದು ಯೋಚಿಸಿದಳು .ಇಂಟರ್ನೆಟ್ ಸಹಾಯ ಪಡೆದು ನನ್ನ ಆಸಕ್ತಿ ಮತ್ತು ಸಮಯ ಜೊತೆಗೆ ಹಣ ಗಳಿಸಬಹುದೆ ಎಂದು ಯೋಚಿಸಿದಳು. ಮತ್ತು ಕಾರ್ಯಪ್ರವೃತ್ತರಾದಳು. ಈಗ ಅವಳು Digital marketer, Web-columnist ಮತ್ತು Blogging ಅಲ್ಲಿ ಪ್ರಾವೀಣ್ಯ  ಪಡೆದಳು. ಈಗ ಅವಳು ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ಹಾದಿಯಲ್ಲಿದ್ದಾಳೆ

ಮೇಲಿನ ಉದಾಹರಣೆಯಂತೆ ಅನೇಕ ಮಹಿಳೆಯರು ಹೀಗೆಯೇ ಯೋಚಿಸಿರುತ್ತಾರೆ. ಇಂಟರ್ನೆಟ್ ಅನ್ನು ಬಳಸಿ ಹೇಗೆ ಹಣವನ್ನು ಗಳಿಸಬಹುದು ಎಂದು. ಇದಕ್ಕೆ ಕಾರಣಗಳು ನೂರಾರು. ಅವರು ಮನೆಯಲ್ಲಿ ಕುಳಿತು  ಮಾಡುವ ಕೆಲಸಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಏಕೆಂದರೆ ಸಮಯದ ಅಭಾವ ಅಥವಾ ಸಮಯಕ್ಕೆ ಸರಿಯಾಗಿ ಜವಾಬ್ದಾರಿಗಳನ್ನು ಮುಗಿಸಲೇ ಬೇಕೆಂದು ಧಾವಂತವೇ ಇವೇ ಮೊದಲಾದವುಗಳು ಇವೆ.

ಕೇವಲ ಆಫೀಸ್, ಸ್ಕೂಲ್, ಕಾಲೇಜ್ ಮತ್ತಿತರ ಕೆಲಸ ಮಾಡುವ ಮಹಿಳೆಯರು ಸಾಕಷ್ಟು ವರ್ಕ್ಲೋಡ್ ಅನ್ನು ಅನುಭವಿಸುತ್ತಾರೆ. ಮತ್ತು ಅವರಿಗೆ ಸಮಯವನ್ನು ಮ್ಯಾನೇಜ್ ಮಾಡುವುದು ಒಂದು ಸವಾಲು  ಆಗಿರುತ್ತದೆ. ಮಕ್ಕಳು, ಅವರ ಲಾಲನೆ-ಪಾಲನೆ ಮುಂತಾದವುಗಳಲ್ಲಿ ಬಿಜಿಯಾಗಿರುತ್ತಾರೆ. ಅಲ್ಲದೆ ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಮಹಿಳೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ತರಕಾರಿ ಹಾಲು ಹಣ್ಣು ಇತ್ಯಾದಿಗಳಲ್ಲಿ ಮುಳುಗಿರುತ್ತಾರೆ. ಈ ನಡುವೆ ಕಲೆಗೆ ಅಂದರೆ ಯಾವುದೇ ವಿಭಾಗ ವಾಗಿರಬಹುದು, ಕೈಬರಹ, ಅಂಕಣ, ಕೈರುಚಿ ಫ್ಯಾಶನ್ ಡಿಸೈನ್ ಮತ್ತೆ ಜ್ಯುವೆಲರಿ ಇಂಥವುಗಳಿಗೆ ಸರಿಯಾದ ವೇದಿಕೆ ಸಿಗದೇ ಇರಬಹುದು ಮತ್ತು ಇಂತಹ ಕಲೆಗಳಿಗೆ ಸಮಯ ಮತ್ತು ಹಣದ ಹೂಡಿಕೆಗಳು ಆಗದೇ ಇರಬಹುದು.

ಇಂತಹ ಸನ್ನಿವೇಶದಲ್ಲಿ ನಿಮ್ಮ ಮನೆಯಿಂದ ಹೊರಬರದೆ ನೀವು ಇಂಟರ್ನೆಟ್ ಬಳಸಿ ಹಣ ಸಂಪಾದಿಸುವುದು ಹೇಗೆ ಎಂದು ತಿಳಿಯಲು ನೀವು ಬಯಸುವಿರಾ?ಹೌದು ಎಂದಾದರೆ ಈ ಬರಹ ನಿಮಗೆ ಉಪಯುಕ್ತವಾಗಬಹುದು. ಸಾಕಷ್ಟು ಮಹಿಳೆಯರು ಕೆಲವು ಗೊಂದಲದಲ್ಲಿರುತ್ತಾರೆ. 

ಮನೆಯಲ್ಲಿ ಕುಳಿತು ಕೆಲಸ ಮಾಡುವುದು ಹೇಗೆ? 

ಅದರಿಂದ ಆದಾಯ ಹೇಗೆ ಬರುವುದು? 

ಒಂದು ವೇಳೆ ಕೆಲಸದ ಒತ್ತಡ ಹೆಚ್ಚಾದರೆ ಮನೆಯನ್ನು ನಿಭಾಯಿಸಲು ಕಷ್ಟವಾಗಬಹುದು, ಹಾಗಾದಾಗ ಏನು ಮಾಡಬೇಕು? 

ಕೋವಿಡ್ ಅಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡುವುದು ಹೇಗೆ? 

ಇಂಟರ್ನೆಟ್ ಬಳಸಿ ಹಣ ಗಳಿಸುವುದು ಹೇಗೆ?

ಇಂತಹ ಕೆಲ ಪ್ರಶ್ನೆಗಳು ನಿಮಗೆ ಬರಬಹುದು.

ವೃತ್ತಿಜೀವನ ಮತ್ತು ಕುಟುಂಬ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಬಹುತೇಕ ಮಹಿಳೆಯರ ಒಂದು ಸವಾಲು. ಬಹುತೇಕ ಮಹಿಳೆಯರು ತಮ್ಮ ವೃತ್ತಿಯನ್ನು  ಬಿಡುವುದು ಇದೇ ಕಾರಣಕ್ಕಾಗಿ .ಮನೆ ಕೆಲಸ, ಮಕ್ಕಳ ಲಾಲನೆ-ಪಾಲನೆ ಮುಂತಾದವುಗಳು ಗೋಸ್ಕರ ವೃತ್ತಿಜೀವನವನ್ನು ಬಿಟ್ಟ ಎಷ್ಟೋ ಮಹಿಳೆಯರು ಇದ್ದಾರೆ.

ಅದೃಷ್ಟವಶಾತ್ ಅಂತರ್ಜಾಲ ಇರುವುದರಿಂದ ಇಂಥ ಮಹಿಳೆಯರಿಗಾಗಿ ಈ ವ್ಯವಸ್ಥೆ ವರವಾಗಿ ಪರಿಣಮಿಸಿದೆ. ಇದು ನಿಮಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು ಮಾತ್ರವಲ್ಲದೆ ನಿಮ್ಮ ಆತ್ಮ ವಿಶ್ವಾಸವನ್ನು ಸುಧಾರಿಸಲು ಮತ್ತು ಸಮಾಜದಲ್ಲಿ ನಿಮ್ಮ ಸ್ವಂತ ಗುರುತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಹಣಗಳಿಕೆಗೆ  ಇಂಟರ್ನೆಟ್ ಅನ್ನು ಏಕೆ ಬಳಸಬೇಕು ಎಂಬುದಕ್ಕೆ ಈ ಕೆಳಗಿನ ಕಾರಣಗಳನ್ನು ನೀಡಬಹುದು.

 1. ನಿಮ್ಮ ಮನೆಯಿಂದಲೇ ನೀವು ಹಣವನ್ನು ಸುಲಭವಾಗಿ ಗಳಿಸಬಹುದು.

 

ಹೌದು, ಗೃಹಿಣಿ ಯಾದವರಿಗೆ ಮನೆ ಮತ್ತು ಕಚೇರಿ ಕೆಲಸ ಎರಡು ಶ್ರಮದಾಯಕ ಎನಿಸುತ್ತದೆ. ಮಕ್ಕಳು ಇದ್ದರಂತೂ ಲಾಲನೆ-ಪಾಲನೆಯಲ್ಲಿ ಮುಳುಗಿರುತ್ತಾರೆ. ಹೀಗಾದಾಗ ಮನೆಯಲ್ಲಿ ಕುಳಿತು ಹಣಗಳಿಕೆಗೆ ಮಾರ್ಗವಾಗಿ ಇಂಟರ್ನೆಟ್ ಉಪಯುಕ್ತವಾಗಿದೆ. ಅಂತರ್ಜಾಲದ ಸಹಾಯದಿಂದ ನಿಮ್ಮ ಪ್ರತಿಭೆ, ಅಥವಾ ಆಸಕ್ತಿ ಅಥವಾ ನಿಮ್ಮ ಜ್ಞಾನವನ್ನು ಬಳಸಿಕೊಂಡು ಹಣವನ್ನು ಗಳಿಸುವುದು ಹೇಗೆ ಎಂಬುದನ್ನು ನೀವು ಕಲಿಯಬೇಕಾಗಿದೆ. 

2. ಯಾವುದೇ commitments (ಬದ್ಧತೆ) ಇರುವುದಿಲ್ಲ.

 

ಯಾವುದೇ ಕ್ಷೇತ್ರಗಳಲ್ಲಿ ಕೆಲಸದ ಒತ್ತಡವು ಸಹಜವಾಗಿರುತ್ತದೆ. ಆಫೀಸಿನ ಅಂತ ಕೆಲಸಗಳು ಬದ್ಧತೆಯನ್ನು ಕೇಳುತ್ತದೆ. ಇದರಿಂದ ಆಕೆಗೆ ಒತ್ತಡ ವಾಗುತ್ತದೆ. ನೀವು ಇಂಟರ್ನೆಟ್ ಬಳಸಿಕೊಂಡು ಮನೆಯಿಂದ ಕೆಲಸ ಮಾಡಲು ಆಯ್ಕೆ ಮಾಡಿದಾಗ ಕೆಲಸ ಈಗಲೇ ಮುಗಿಸಬೇಕೆಂದು ಧಾವಂತ ಇರುವುದಿಲ್ಲ. ಇಂಟರ್ನೆಟ್ ಬಳಸಿ ಕೆಲಸ ಮಾಡುವುದರಿಂದ ಆಕೆ ಒತ್ತಡರಹಿತವಾಗಿ ಇರುತ್ತಾಳೆ. ಇದರಿಂದ ತನ್ನ ಕಲೆಯ ಬಗ್ಗೆ ಇನ್ನೂ ಹೆಚ್ಚಾಗಿ ಕೆಲಸವನ್ನು ಮಾಡುತ್ತಾಳೆ.

3. ಯಾವುದೇ ತೆರನಾದ ಹೂಡಿಕೆಗಳು ಇರುವುದಿಲ್ಲ.

ಸಹಜವಾಗಿ ಗೃಹಿಣಿಯರು  ಒಂದು ಬಗೆಯಾದ ಗೊಂದಲದಲ್ಲಿರುತ್ತಾರೆ. ವ್ಯಾಪಾರ ವಹಿವಾಟು ಮಾಡುವುದರಿಂದ ಬಂಡವಾಳಕ್ಕೆ ಹಣವನ್ನು ಹೇಗೆ ಹೊಂದಿಸುವುದು ಎಂದು. ಆದರೆ ಇಂಟರ್ನೆಟ್ ಬಳಸಿ ಕೆಲಸ ಮಾಡುವುದರಿಂದ ಯಾವುದೇ ಹೂಡಿಕೆಗಳು ಇರುವುದಿಲ್ಲ ಮತ್ತು ಅವರ ಪ್ರತಿಭೆಯೇ ಇಲ್ಲಿ ಬಂಡವಾಳವಾಗಿರುತ್ತದೆ. ನಿಮ್ಮ ಹಣವನ್ನು ನೀವು ಯಾವುದನ್ನಾದರೂ ಸ್ಟಾಕ್ ಮಾಡಲು ಅಥವಾ ಸಾರಿಗೆಗಾಗಿ ಹೂಡಿಕೆ ಮಾಡಬೇಕಾಗಿಲ್ಲ ಮತ್ತು ವ್ಯರ್ಥ ರೂಪದಲ್ಲಿ ನೀವು ಯಾವುದೇ ಹಣವನ್ನು ಕಳೆದುಕೊಳ್ಳುವುದಿಲ್ಲ.

 ಇಲ್ಲಿ ಎಲ್ಲವನ್ನೂ ಆನ್‌ಲೈನ್‌ನಲ್ಲಿ ವ್ಯವಹರಿಸುವುದರಿಂದ, ಸಮಯ ಮತ್ತು ನಿಮ್ಮ ಶ್ರಮ ಮಾತ್ರ ನಿಮ್ಮ ಹೂಡಿಕೆಯಾಗಿರುತ್ತದೆ ನೀವು ಇಲ್ಲಿ ಗಳಿಸುವ ಹಣವೇ ನಿಮ್ಮ ಲಾಭವಾಗಿರುತ್ತದೆ.

ಈಗ ಹಣಗಳಿಕೆಗೆ ಇಂಟರ್ನೆಟ್ ಅನ್ನು ಏಕೆ ಬಳಸಬೇಕೆಂದು ತಿಳಿದಿದ್ದೇವೆ. ಮತ್ತು ಈಗ ಇಂಟರ್ನೆಟ್ ಬಳಸಿ ಹಣಗಳಿಸುವ ಕೆಲವು ಮಾರ್ಗಗಳನ್ನು ತಿಳಿದುಕೊಳ್ಳೋಣ.

 1. Blogging-

 

ಬ್ಲಾಗ್ ಬರೆಯುವುದು ಒಂದು ಅತ್ಯುತ್ತಮ ಆಯ್ಕೆ. ನೀವು google ನಲ್ಲಿ ಯಾವುದೇ ಮಾಹಿತಿಗಾಗಿ ಹುಡುಕಿದಾಗಲೆಲ್ಲ ನೀವು ಪ್ರಕಟವಾದ ಬಹಳಷ್ಟು ಲೇಖನಗಳನ್ನು ನೋಡುತ್ತೀರಿ,

ಅಂತಹ ಲೇಖನಗಳನ್ನು ಬ್ಲಾಗ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಬರೆಯುವ ಜನರನ್ನು ಬ್ಲಾಗರ್‌ಗಳು ಎಂದು ಕರೆಯಲಾಗುತ್ತದೆ. ಗೃಹಿಣಿಯಾಗಿರುವ ನಾನು ಯಾವ ವಿಷಯದ ಬಗ್ಗೆ ಬ್ಲಾಗ್ ಬರೆಯಬಹುದು ಎಂದು ನೀವು ಹೆಚ್ಚು ಯೋಚಿಸಬೇಕಾಗಿಲ್ಲ.

ಇಂಟರ್ನೆಟ್ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಎಲ್ಲದಕ್ಕೂ ಅಥವಾ ಕಲ್ಪನೆಗೂ ಮೌಲ್ಯವಿದೆ. ಬ್ಲಾಗ್‌ಗಳನ್ನು ಬರೆಯಲು ನೀವು ಆಯ್ಕೆ ಮಾಡಬಹುದಾದ ಕೆಲವು ವಿಚಾರಗಳನ್ನು ಕೆಳಗೆ ನೀಡಲಾಗಿದೆ. ಆದರೆ ನಿಮಗೆ ಆಸಕ್ತಿಯಿರುವ ಯಾವುದೇ ವಿಷಯವನ್ನು ನೀವು ಆಯ್ಕೆ ಮಾಡಬಹುದು.

 1. ಅಡುಗೆ
 2. ಹೊಲಿಗೆ
 3. ಮತ್ತು
 4. ಆರಿ ವಿನ್ಯಾಸ
 5. ಕುಚು ವಿನ್ಯಾಸ
 6. ಮಕ್ಕಳನ್ನು ಹೇಗೆ ನಿರ್ವಹಿಸುವುದು
 7. ಮನೆ ಅಲಂಕಾರ
 8. ಶಿಸ್ತು
 9. ಶಿಕ್ಷಣ
 10. ಮನರಂಜನೆ
 11. ಯೋಗ
 12. ಮನೆಮದ್ದುಗಳು

ಇದು ಎಲ್ಲರಿಗೂ ತಿಳಿದಿರುವ ವಿಷಯವಾದ್ದರಿಂದ ನನ್ನ ಲೇಖನಗಳನ್ನು ಯಾರು ಓದುತ್ತಾರೆ ಎಂದು ನೀವು ಯೋಚಿಸಬೇಕಾಗಿಲ್ಲ ನೀವು ಉತ್ತಮವಾಗಿರುವ ಅಥವಾ ನೀವು ಆಸಕ್ತಿ ಹೊಂದಿರುವ ಈ ಮಾಹಿತಿಯ ಅಗತ್ಯವಿರುವ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಒಮ್ಮೆ ನೀವು ವಿಷಯವನ್ನು ಬರೆದು ಪ್ರಕಟಿಸಿದ ನಂತರ ನಿಮ್ಮ ಪ್ರೇಕ್ಷಕರು Google ಸಹಾಯದಿಂದ ನಿಮ್ಮನ್ನು ಹುಡುಕುತ್ತಾರೆ ಮತ್ತು ನಿಮ್ಮೊಂದಿಗೆ ಸಂಪರ್ಕ ಹೊಂದುತ್ತಾರೆ

ಬ್ಲಾಗ್ ಬರೆಯುವ ಮೂಲಕ ಹಣ ಸಂಪಾದಿಸಲು 3 ಮಾರ್ಗಗಳಿವೆ

 1. ಗೂಗಲ್ ಪಾಲುದಾರರಾಗುವ ಮೂಲಕ
 2. ನಿಮ್ಮ ಅಂಗಸಂಸ್ಥೆ ಲಿಂಕ್‌ಗಳನ್ನು ಬಳಸುವ ಮೂಲಕ
 3. ಪ್ರಾಯೋಜಕತ್ವದ ಮೂಲಕ

ಅದರಲ್ಲಿ ಹೆಚ್ಚು viewers  ಇರುವುದರಿಂದ ಪ್ರಾಯೋಜಿತ ಕಂಪನಿಗಳು ನಿಮ್ಮ ಅಂಕಣದಲ್ಲಿ ಅವರ ಜಾಹೀರಾತನ್ನು ನೀಡಬಹುದು. ಇದರಿಂದ ಅವರಿಗೂ ಲಾಭವಾದಂತೆ ನಿಮಗೂ ಲಾಭವಾಗುತ್ತದೆ. ಹಣಗಳಿಕೆಯ ಸುಲಭವಾಗುತ್ತದೆ. ಹಾಗಾಗಿಯೇ ಬಹಳಷ್ಟು ಮಹಿಳೆಯರು ಅದರಲ್ಲಿ ಆಸಕ್ತಿ ತೋರುತ್ತಾರೆ.

2. ಆನ್ಲೈನ್ ಶಿಕ್ಷಣ ಅಥವಾ ಆನ್ಲೈನ್ ಕ್ಲಾಸುಗಳು-

ಆನ್‌ಲೈನ್ ಕಲಿಕೆಯು ಈಗ ಬಹಳ ಜನಪ್ರಿಯವಾಗುತ್ತಿದೆ ಎಂದು ನಿಮಗೆ ತಿಳಿದಿರುವಂತೆ, ಜನರು ತಮ್ಮ ಮನೆಯಿಂದ ಕಲಿಯಲು ಅನುಕೂಲವಾಗಿದೆ  ಏಕೆಂದರೆ ಇದು ಸಮಯವನ್ನು ಉಳಿಸಲು, ಟ್ರಾಫಿಕ್ ತಪ್ಪಿಸಲು ಮತ್ತು ಅವರ ಅನುಕೂಲಕರ ಸಮಯದಲ್ಲಿ ಕಲಿಯುವ ಆಯ್ಕೆಯನ್ನು ನೀಡುತ್ತದೆ.

ನೀವು ಯಾವುದೇ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿದ್ದರೆ ಅದನ್ನು share ಮಾಡಲು ಬಯಸಿದರೆ, ಸಾಕಷ್ಟು website ಇವೆ. ನೀವು ಆನ್ಲೈನ್  ಕ್ಲಾಸ ತೆಗೆದುಕೊಳ್ಳ    ಮುಖಾಂತರ  ಒಬ್ಬ ಶಿಕ್ಷಕರಾಗಿಯೂ ಆಗಬಹುದು ಮತ್ತು ಮನೆಯಲ್ಲೇ ಕುಳಿತು ಸಂಪಾದನೆಯೂ ಮಾಡಬಹುದು. ನೀವು ಕನಿಷ್ಟ ಹೂಡಿಕೆಯೊಂದಿಗೆ ನಿಮ್ಮ ಸ್ವಂತ ಆನ್‌ಲೈನ್ ಶಾಲೆಯನ್ನು ಪ್ರಾರಂಭಿಸಬಹುದು ಅಥವಾ ಕೆಲ ಅಂಗವಿಕಲ ಮಹಿಳೆಯರಿಗೂ ಈ ವಿಧಾನವು ಅನುಕೂಲಕರವಾಗಿ ಪರಿಣಮಿಸುತ್ತದೆ.

 1. Cooking classes-

 

ನೀವು ಅಡುಗೆಯಲ್ಲಿ ಆಸಕ್ತಿ ಇದ್ದರೆ ಕುಕಿಂಗ್ ಕ್ಲಾಸೀಸ್  ಕೂಡ ತೆಗೆದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಅಡಿಗೆಯೂ ಕೂಡ ಒಂದು ಕಲೆಯೆಂದು ಸಾಬೀತಾಗಿದೆ. ಅಡಿಗೆ ಬರದೇ ಎಷ್ಟೋ ಜನರು ಈಗ ಇಂಟರ್ನೆಟ್  ಮೊರೆ ಹೋಗುವವರು ಇದ್ದಾರೆ. ನೀವು ಅಂತಹ ಕ್ಲಾಸಸ್ ಕೈಗೊಳ್ಳುವುದರಿಂದ ಅವರಿಗೆ ಗೈಡ್ ಮಾಡಿದಹಾಗೆ ಆಗುತ್ತದೆ ಮತ್ತು ಇದರಿಂದ ನಿಮ್ಮ ಸಂಪಾದನೆಯೂ ಆಗುತ್ತದೆ.

ಉದಾಹರಣೆಗೆ ಹೆಬ್ಬಾರ್ ಮನೆತನದ ಮಹಿಳೆಯೊಬ್ಬಳು ತಾನು ಮಾಡುವ ಅಡುಗೆಯನ್ನೇ ಬಂಡವಾಳವಾಗಿಸಿಕೊಂಡು , ಅದಕ್ಕೆ ಹೆಬ್ಬಾರ್ಸ್ ಕಿಚನ್ ಅಂತ ಹೆಸರಿಟ್ಟು ಅದನ್ನು ಇಂಟರ್ನೆಟ್ ಸಹಾಯ ಪಡೆದು ಅಂದರೆ ರೆಸಿಪಿಯನ್ನು ಯೂಟ್ಯೂಬ್ ಸಹಾಯ ಪಡೆದು ಶೇರ್ ಮಾಡಿದರು. ಅದರಿಂದ ಬಹಳ ಜನಕ್ಕೆ ಉಪಯೋಗವಾಯಿತು . ಇದರಿಂದ ಆಕೆ ಪ್ರಸಿದ್ಧಿ ಹೊಂದಿದ್ದಳು ಮತ್ತು ಮನೆಯಲ್ಲಿ ಕುಳಿತು ಹಣವನ್ನು ಗಳಿಸಿ ತೊಡಗಿದರು.

ನಾನು ಮೇಲೆ ತಿಳಿಸಿದ ಉದಾಹರಣೆಯಲ್ಲಿ ಅಂದರೆ Rachana parmar ಅಂತಹ ಮಹಿಳೆಗೆ ಇಂಟರ್ನೆಟ್ ಬಳಸಿ ಹಣ ಗಳಿಸಬೇಕೆಂದುಕೆಂಬುದು ಇತ್ತು. ಆಕೆಗೆ digital marketing, Blogging, web columnar ಅಂತಹ ಪದಗಳು ತೀರ ಹೊಸದು. ಹೀಗಾಗಿ ಮೊದಲು ಇವುಗಳನ್ನು ಕಲಿಯಲು ಪ್ರಾರಂಭಿಸಿದರು. Blogging ಮತ್ತು digital marketing ಅಲ್ಲೇ ಪರಿಣಿತಿ ಪಡೆದರು. ಪರಿಣಾಮವಾಗಿ ಹಣ ಗಳಿಕೆ ಮಾರ್ಗವು ಸುಲಭವಾಯಿತು. ಅದು ಮನೆಯಲ್ಲೇ.

ನಿಮಗೂ ಕೂಡ ತೆರನಾಗಿ Digital marketing ಬಗ್ಗೆ ಆಸಕ್ತಿ ಇದ್ದರೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಫೇಸ್‌ಬುಕ್‌ನಲ್ಲಿ LEARERNERZONES ಗ್ರೂಪ್‌ಗೆ ಉಚಿತವಾಗಿ ಸೇರಿಕೊಳ್ಳಿ

ಮೇಲಿನವು ಕೆಲ ಉದಾಹರಣೆಯಷ್ಟೇ. ಇನ್ನು ತುಂಬಾ ಕ್ಷೇತ್ರಗಳು ಇಂಟರ್ನೆಟ್ಟಲ್ಲಿ ಲಭ್ಯವಿದೆ. ಅವುಗಳ  ಉಪಯೋಗವನ್ನು ಪಡೆದು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸಬಹುದು.

ಕೊನೆಮಾತು-

ಆರ್ಥಿಕ ಸ್ವಾತಂತ್ರ್ಯವು ಒಂದು ಬಗೆಯಾದ ಆತ್ಮವಿಶ್ವಾಸವನ್ನು ಕೊಡುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರಿಗೂ ಅದರ ಸಮಾನವಾದ ಹಕ್ಕಿದೆ. ಆದರೆ ಮಹಿಳೆ ವಿಭಿನ್ನವಾಗಿ ನಿಲ್ಲುತ್ತಾಳೆ

ಹಣಗಳಿಕೆಯ ಮಾರ್ಗವು ವಿಶೇಷವಾಗಿರುತ್ತದೆ.Technology ಮುಂದುವರೆದಂತೆ ಹಣಗಳಿಕೆಯ ಮಾರ್ಗವು update ಆಗಿರುತ್ತದೆ. ಮನೆಯನ್ನು ನೋಡಿಕೊಳ್ಳುವ ಮಹಿಳೆ ಇಂಟರ್ನೆಟ್ ಅನ್ನು ಬಳಸಿ ತನ್ನ ಪ್ರತಿಭೆಯನ್ನು ಹೊರಹಾಕಬಹುದು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸಬಹುದು.

ನಿಮಗೆ ಈ ಅಂಕಣ ಇಷ್ಟವಾಗಿದ್ದರೆ ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಮೆಂಬರ್ಸ್ ಜೊತೆ ಶೇರ್ ಮಾಡಲು ಮರೆಯದಿರಿ. ನಿಮ್ಮ ಕಮೆಂಟ್ ಗಳಿಗೆ ಸ್ವಾಗತ. ನಿಮ್ಮ ಕಮೆಂಟನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

ನೀವು ಇನ್ನೂ ಗೊಂದಲದಲ್ಲಿದ್ದರೆ ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದಿಲ್ಲದಿದ್ದರೆ, ನಮ್ಮ CAREER BREAKTHHROUGH FORMULA  ಕೋರ್ಸ್‌ ತೆಗೆದುಕೊಳ್ಳಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ ಏಕೆಂದರೆ ಇದು ಅನೇಕ ಗೃಹಿಣಿಯರು ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಉತ್ತಮ ಸ್ಪಷ್ಟತೆಯನ್ನು ಪಡೆಯಲು ಸಹಾಯ ಮಾಡಿದೆ. ಈಗ ಬಹುತೇಕರು ಮನೆಯಿಂದಲೇ ಸಂಪಾದಿಸಲು ಆರಂಭಿಸಿದ್ದಾರೆ.

ಈ ಕೋರ್ಸ್‌ನ ಕುರಿತು ನಿಮಗೆ ಹೆಚ್ಚಿನ ವಿವರಗಳ ಅಗತ್ಯವಿದ್ದರೆ ನನ್ನ whatsapp ನಲ್ಲಿ ನೀವು ನನ್ನನ್ನು ಸಂಪರ್ಕಿಸಬಹುದು 8884690616.

CBF